ವಿವೇಕಾನಂದ ಜಯಂತಿ ಎಂದೂ ಕರೆಯಲ್ಪಡುವ ರಾಷ್ಟ್ರೀಯ ಯುವ ದಿನವನ್ನು ಹಿಂದೂ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ ೧೨ ರಂದು ಆಚರಿಸಲಾಗುತ್ತದೆ. ೧೯೮೪ರಲ್ಲಿ, ಭಾರತ ಸರ್ಕಾರವು ಈ ದಿನವನ್ನು ರಾಷ್ಟ್ರೀಯ ಯುವ ದಿನವೆಂದು ಘೋಷಿಸಿತು ಮತ್ತು ೧೯೮೫ರಿಂದ ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಭಾರತದಲ್ಲಿ ಆಚರಿಸಲಾಗುತ್ತಿದೆ. == ಇತಿಹಾಸ == ಮಹಾನ್ ಸ್ವಾಮಿ ವಿವೇಕಾನಂದ ಅವರ ಜನ್ಮದಿನವನ್ನು ಅಂದರೆ ಜನವರಿ ೧೨ ಅನ್ನು ಪ್ರತಿ ವರ್ಷ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲು ೧೯೮೪ರಲ್ಲಿ ಭಾರತ ಸರ್ಕಾರ ತೆಗೆದುಕೊಂಡ ನಿರ್ಧಾರವಾಗಿತ್ತು. ಸ್ವಾಮಿ ವಿವೇಕಾನಂದ ಅವರ ತತ್ತ್ವಶಾಸ್ತ್ರ ಮತ್ತು ಅವರ ಬದುಕಿನ ಆದರ್ಶಗಳು ಭಾರತೀಯ ಯುವ ದಿನಾಚರಣೆಗೆ ಸ್ಫೂರ್ತಿಯ ಉತ್ತಮ ಮೂಲವಾಗಿದೆ.ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮ ಹಂಸರ ಶಿಷ್ಯರಾಗಿದ್ದರು. == ಆಚರಣೆ ಮತ್ತು ಚಟುವಟಿಕೆಗಳು == ರಾಷ್ಟ್ರೀಯ ಯುವ ದಿನವನ್ನು ಭಾರತದಾದ್ಯಂತ ಶಾಲಾ-ಕಾಲೇಜುಗಳಲ್ಲಿ ಆಚರಿಸಲಾಗುತ್ತದೆ, ಮೆರವಣಿಗೆಗಳು, ಭಾಷಣಗಳು, ಸಂಗೀತ, ಯುವ ಸಮಾವೇಶಗಳು, ವಿಚಾರಗೋಷ್ಠಿಗಳು, ಯೋಗಾಸನಗಳು, ಪ್ರಸ್ತುತಿಗಳು, ಪ್ರಬಂಧ-ಬರಹ, ಪಠಣಗಳು ಮತ್ತು ಕ್ರೀಡೆಗಳಲ್ಲಿ ಸ್ಪರ್ಧೆಗಳು ಪ್ರತಿ ವರ್ಷ ಜನವರಿ ೧೨ರಂದು ನಡೆಯುತ್ತವೆ. ಸ್ವಾಮಿ ವಿವೇಕಾನಂದರ ಉಪನ್ಯಾಸಗಳು ಮತ್ತು ಬರಹಗಳು, ಭಾರತೀಯ ಆಧ್ಯಾತ್ಮಿಕ ಸಂಪ್ರದಾಯದಿಂದ ಮತ್ತು ಅವರ ಗುರು ಶ್ರೀ ರಾಮಕೃಷ್ಣ ಪರಮಹಂಸ ಅವರ ವಿಶಾಲ ದೃಷ್ಟಿಕೋನದಿಂದ ಸ್ಫೂರ್ತಿ ಪಡೆದಿವೆ. ಇವು ಸ್ಫೂರ್ತಿಯ ಮೂಲವಾಗಿದ್ದವು ಮತ್ತು ಯುವಕರನ್ನು ಒಳಗೊಂಡ ಹಲವಾರು ಯುವ ಸಂಘಟನೆಗಳು, ಅಧ್ಯಯನ ವಲಯಗಳು ಮತ್ತು ಸೇವಾ ಯೋಜನೆಗಳಿಗೆ ಪ್ರೇರಣೆ ನೀಡಿವೆ. == ಉಲೇಖಗಳು ==